ಕಟಾಂಗ : ಆಫ್ರಿಕದ ಕಾಂಗೋ ಗಣರಾಜ್ಯದ ಒಂದು ಪ್ರಾಂತ್ಯವಾಗಿದ್ದ ಪ್ರದೇಶ. ಪುರ್ವ ರೇಖಾಂಶ 220 ಯಿಂದ 120 ಯವರೆಗೂ ವ್ಯಾಪಿಸಿರುವ ಈ ಪ್ರದೇಶದ ವಿಸ್ತೀರ್ಣ 596962 ಚ ಕಿಮೀ ಜನಸಂಖ್ಯೆ ಸು. 5,608,683 (2010). ಇವರ ಪೈಕಿ 33,507 ಐರೋಪ್ಯರು. ಈಶಾನ್ಯದಲ್ಲಿ ಟಾಂಗನ್ಯೀಕ ಸರೋವರ, ಪುರ್ವದಕ್ಷಿಣಗಳಲ್ಲಿ eóÁಂಬಿಯ, ಪಶ್ಚಿಮದಲ್ಲಿ ಆಂಗೋಲ-ಇವು ಇದರ ಮೇರೆಗಳು. ಬೆಟ್ಟಗುಡ್ಡಗಳಿಂದಲೂ ಪ್ರಸ್ಥಭೂಮಿಗಳಿಂದಲೂ ಕೂಡಿರುವುದರಿಂದ ಈ ಪ್ರದೇಶದಲ್ಲಿ ನಡು ನಡುವೆ ತಗ್ಗು ನೆಲಗಳಿವೆ. ಇವುಗಳಲ್ಲಿ ಉವಂಬ ಮುಖ್ಯವಾದುದು. ಸರೋವರಗಳಿಂದಲೂ ಜೌಗು ನೆಲಗಳಿಂದಲೂ ಕೂಡಿರುವ ಈ ಪ್ರದೇಶದಲ್ಲಿ  ಕಾಂಗೋನದಿಯ ತಲೆದೊರೆಯಾದ (ಹಡ್ಸ್ಟ್ರೀಮ್) ಲೂವಲಾಬ ಹರಿಯುತ್ತದೆ. ಕಟಾಂಗ ಎತ್ತರದಲ್ಲಿರುವುದರಿಂದ ಇಲ್ಲಿಯ ವಾಯುಗುಣ ತಂಪು. ವಾರ್ಷಿಕ ಸರಾಸರಿ ಉಷ್ಣತೆ 200 ಸೆಂ. (680ಫ್ಯಾ,). ಅಕ್ಟೋಬರ್ ಮಧ್ಯದಿಂದ ಏಪ್ರಿಲ್ ಮಧ್ಯದ ವರೆಗೆ ಬೇಸಗೆ ಮತ್ತು ಮಳೆಗಾಲ. ವಾರ್ಷಿಕ ಮಳೆ 55". ಕಾಡು, ಸವನ್ನ, ಹುಲ್ಲುಗಾವಲು-ಇಲ್ಲಿಯ ಮುಖ್ಯ ಸಸ್ಯ. ಸಿಂಹಗಳೂ ಘೇಂಡಾಮೃಗಗಳೂ ಇವೆ. 12730 ಚ ಕಿಮೀ ವಿಸ್ತಾರವಾಗಿರುವ ಉಪೆಂಬ ರಾಷ್ಟ್ರೀಯ ವನದಲ್ಲಿ ಆನೆ, ಹೇಸರಗತ್ತೆ, ಎಮ್ಮೆ, ಜಿಂಕೆ ಮುಂತಾದವು ಆಶ್ರಯ ಪಡೆದಿವೆ.

ಮುಸುಕಿನ ಜೋಳ, ನೆಲಗಡಲೆ, ಮರಗೆಣಸು ಮತ್ತು ಹತ್ತಿ ಮುಖ್ಯ ಬೆಳೆಗಳು. ದನಕರುಗಳು ಮತ್ತು ಕುರಿಗಳನ್ನು ಮಾಂಸ ಮತ್ತು ಉಣ್ಣೆಗಳಿಗಾಗಿ ಸಾಕುವರು. ತಾಮ್ರ, ಕೋಬಾಲ್ಟ್‌, ಯುರೇನಿಯಂ, ಸೀಸ, ತವರ, ಸತುವು ಮುಖ್ಯ ಖನಿಜಗಳು. ಕಡಿಮೆ ದರ್ಜೆಯ ಕಲ್ಲಿದ್ದಲೂ ಸಿಗುತ್ತದೆ.
ಕಾಲ್ವೇಜಿû ತಾಮ್ರದ ಗಣಿಪಟ್ಟಣ. ಕಬಾಲೋ ಲೂವಬಾಲದ ದಡದ ಮೇಲಿದೆ. ಮನೋನೊ ಮತ್ತು ಮಿಟ್ವಾಬ ತವರದ ಗಣಿ ಕೇಂದ್ರಗಳು. ಕಮೀನ ರೈಲ್ವೆ ಮತ್ತು ರಸ್ತೆಗಳ ಸಂಧಿ, ಮುಖ್ಯ ಸೇನಾ ಕೇಂದ್ರ.

ಕಟಾಂಗದ ಸಾರಿಗೆ ವ್ಯವಸ್ಥೆ ತಕ್ಕಮಟ್ಟಿಗೆ ಅಭಿವೃದ್ಧಿ ಹೊಂದಿದೆ. ಎಲಿಸóಬೆತ್ ವಿಲ್, ಜಾ಼ಡೋವೀಲ್ ಮತ್ತು ಆಲ್ಬೇರ್ವೀಲ್ಗಳಿಗೂ ಫ್ರಾಂಕೈ ಮತ್ತು ಎಂಪೇನ್ ಬಂದರುಗಳಿಗೂ ರೈಲ್ವೆಸಂಬಂಧ ಕಲ್ಪಿಸಲಾಗಿದೆ. ಪಶ್ಚಿಮದಲ್ಲಿ ಅಟ್ಲಾಂಟಿಕ್ ಬಂದರಾದ ಲೊಬಿಟೊ ದೊಡನೆಯೂ ಸಂಪರ್ಕವುಂಟು. ಟಾಂಗನ್ಯೀಕ ಸರೋವರವೂ ಲೂವಬಾಲ ನದಿಯೂ ಜಲಮಾರ್ಗಗಳಿಗೆ ಅನುಕೂಲಕರ. ಎಲಿಸóಬೆತವಿಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ.

1891-92ರಲ್ಲಿ ಕ್ಯಾಪ್ಟನ್ ಸ್ಟೇರ್ಸ್‌ ನಡೆಸಿದ ಪರಿಶೋಧನೆಯ ಫಲವಾಗಿ ಕಟಾಂಗ ಪ್ರದೇಶ ಕಾಂಗೋಸ್ವತಂತ್ರ್ಯರಾಜ್ಯಕ್ಕೆ ಒಳಪಟ್ಟಿತು. ಕಾಂಗೋ ಸ್ವತಂತ್ರ್ಯರಾಜ್ಯವೂ ಕಟಾಂಗ ಕಂಪನಿಯೂ ಕೂಡಿಕೊಂಡು ಈ ಪ್ರದೇಶದಲ್ಲಿ ಖನಿಜ ತೆಗೆಯುವ ಹಕ್ಕನ್ನು ಬೆಲ್ಜಿಯನ್ ವ್ಯಾಪಾರಸಂಸ್ಥೆಯೊಂದಕ್ಕೆ ನೀಡಿದುವು (1906). 1910ರಲ್ಲಿ ಎಲಿಸóಬೆತ್ವಿಲ್ ಕಟಾಂಗದ ರಾಜಧಾನಿಯಾದ ಮೇಲೆ ಬೆಲ್ಜಿಯನರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದರು. 1960ರ ಜೂನ್ 30ರಂದು ಕಾಂಗೋ ಸ್ವತಂತ್ರ್ಯವಾದ ಮೇಲೆ ಕಟಾಂಗದಲ್ಲಿ ಮೋಯಿಸ್ ಷೋಂಬೆ ಪ್ರಬಲನಾಗಿ, ಕೇಂದ್ರದಲ್ಲಿ ಕಮ್ಯೂನಿಸ್ಟ್‌ ಸರ್ಕಾರವಿದೆಯೆಂಬ ನೆವವೊಡ್ಡಿ ಕಟಾಂಗದ ಸ್ವಾತಂತ್ರ್ಯವನ್ನು ಸಾರಿದನಲ್ಲದೆ (1960ರ ಜುಲೈ 11) ಮುಂದೆ ತಾನೇ ಅಧ್ಯಕ್ಷನಾದ. ಕಾಂಗೋ ರಾಜ್ಯಗಳ ಒಕ್ಕೂಟಕ್ಕೆ ಷೋಂಬೆ ಸಮ್ಮತಿಸಿದನಾದರೂ ಕಟಾಂಗದ ಸ್ವಾಯತ್ತೆಯನ್ನು ಪುರಸ್ಕರಿಸಬೇಕೆಂಬುದು ಆತನ ವಾದವಾಗಿತ್ತು. 1962ರಲ್ಲಿ ವಿಶ್ವಸಂಸ್ಥೆ ಕಟಾಂಗದ ಮೇಲೆ ಸೇನಾ ಕ್ರಮ ಕೈಕೊಂಡ ಮೇಲೆ ಇದರ ಪ್ರತ್ಯೇಕತೆ ಕೊನೆಗೊಂಡಿತು. ಕೇಂದ್ರಸರ್ಕಾರ ಇದನ್ನು ಉತ್ತರ ಕಟಾಂಗ ಮತ್ತು ಲೂವಲಾಬ ಎಂದೂ ಪೂರ್ವ ಕಟಾಂಗ ಎಂದೂ ಎರಡು ಪ್ರಾಂತ್ಯಗಳಾಗಿ ವಿಂಗಡಿಸಿದೆ.                                     (ಎ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ